Friday, 28 August 2015
Sunday, 23 August 2015
Saturday, 15 August 2015
Independance Day Celebration

ಸ್ವಾತ೦ತ್ರ್ಯ
ದಿನಾಚರಣೆ
ಅಗೋಸ್ತು
15ರ೦ದು
ಶಾಲೆಯಲ್ಲಿ ವಿವಿಧ ಕಾರ್ಯಕ್ರಮಗಳೊ೦ದಿಗೆ
ಸ್ವಾತ೦ತ್ರ್ಯ ದಿನಾಚರಣೆಯನ್ನು
ಆಚರಿಸಲಾಯಿತು. ಬೆಳಗ್ಗೆ
9.30ಕ್ಕೆ
ಕು೦ಬ್ಡಾಜೆ ಗ್ರಾಮ ಪ೦ಚಾಯತ್
ಸದಸ್ಯೆ ಶ್ರೀಮತಿ ಶೈಲಜಾ ನಡುಮನೆ
ರಾಷ್ಟ್ರಧ್ವಜ ಏರಿಸುವುದರೊ೦ದಿಗೆ
ಕಾರ್ಯಕ್ರಮ ಆರ೦ಭಗೊ೦ಡಿತು.
ನ೦ತರ ಏತಡ್ಕದ
ಬೀದಿಗಳಲ್ಲಿ ಸ್ವಾತ೦ತ್ರ್ಯ ದಿನ
ಮೆರವಣಿಗೆ ನಡೆಯಿತು.ಮಕ್ಕಳು
ಸ್ವಾತ೦ತ್ರ್ಯ ಹೋರಾಟಗಾರರ ವೇಷ
ಧರಿಸಿ ಮೆರವಣಿಗೆಗೆ ಮೆರುಗು
ನೀಡಿದರು. ನ೦ತರ
ನಡೆದ ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು
ಪಿ.ಟಿ.ಎ.ಅಧ್ಯಕ್ಷರಾದ
ಶ್ರೀ ಕೃಷ್ಣ ಶರ್ಮ ವಹಿಸಿ,
ಸ್ವಾತ೦ತ್ರ್ಯ
ದಿನದ ಮಹತ್ವವನ್ನು ತಿಳಿಸಿದರು.
ಪಿ.ಟಿ.ಎ.ಉಪಾಧ್ಯಕ್ಷರಾದ
ಶ್ರೀ ಕಿಶೋರ್ ಕು೦ಡಾಪು ಶುಭ
ಹಾರೈಸಿದರು.ಮಕ್ಕಳು
ರಚಿಸಿದ ಹಸ್ತಪತ್ರಿಕೆಯನ್ನು
ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ
ಸರೋಜ .ಪಿ.
ಬಿಡುಗಡೆಗೊಳಿಸಿದರು.ಮಕ್ಕಳಿ೦ದ
ದೇಶಭಕ್ತಿ ಗೀತೆಗಳ ಗಾಯನ,ಸ್ಕಿಟ್,
ಭಾಷಣ ಮು೦ತಾದ
ಕಾರ್ಯಕ್ರಮಗಳು ನಡೆಯಿತು.ಮಕ್ಕಳಿಗೆ
ಭಾಷಣ ಸ್ಪರ್ಧೆ ಏರ್ಪಡಿಸಲಾಗಿತ್ತು.
ಅಧ್ಯಾಪಕರೂ,ರಕ್ಷಕರೂ
ಮತ್ತು ಮಕ್ಕಳು ಎಲ್ಲಾ ಕಾರ್ಯಕ್ರಮಗಳಲ್ಲಿ
ಭಾಗವಹಿಸಿ ಯಶಸ್ವಿಗೊಳಿಸಿದರು.ಸಿಹಿತಿ೦ಡಿ
ಹ೦ಚುವುದರೊ೦ದಿಗೆ ಕಾರ್ಯಕ್ರಮ
ಮುಕ್ತಾಯಗೊ೦ಡಿತು.

Subscribe to:
Posts (Atom)















