FLASH NEWS

ಎಲ್ಲರಿಗೂ ಶುಭಾಶಯಗಳು

Wednesday, 28 June 2017

Saturday, 24 June 2017

Kavya vachana





ವಾಚನ ವಾರಾಚರಣೆ 
 ವ್ಯಾಸ ಭಾರತ ಕರ್ನಾಟಕ ಕಥಾಮಂಜರಿಯಿಂದ ಆಯ್ದ ಸುಭದ್ರಾ ಕಲ್ಯಾಣ ಎಂಬ ಕಥಾನಕವನ್ನು ಕಾವ್ಯವಾಚನದ ರೀತಿಯಲ್ಲಿ ವಾಚಿಸಲಾಯಿತು. ಅಧ್ಯಾಪಕರಾದ ಶ್ರೀ ಮಧುಶ್ಯಾಮ ಇವರು ವಾಚಿಸಿ ಶ್ರೀ ರಾಜಾರಾಮ ಕೆ.ವಿ. ಇವರು ಪ್ರವಚನಗೈದರು.  
ನಂತರ ಏಳನೇ ತರಗತಿಯ ಮಕ್ಕಳು ಕಥಾಭಾಗದಿಂದ ಆಯ್ದ ಕೆಲವು ಪ್ರಶ್ನೆಗಳನ್ನು ಕೇಳಿದರು. ಹೆಚ್ಚಿನ ಮಕ್ಕಳು ಸಮರ್ಪಕವಾದ ಉತ್ತರವನ್ನು ನೀಡಿದರು
ಮಕ್ಕಳುಅಧ್ಯಾಪಕರ  ಜೊತೆಗೆ ಕುಳಿತು ಕೆಲವು ಗ್ರಂಥಾಲಯದ ಪುಸ್ತಕಗಳನ್ನು ಓದಿ ತಮ್ಮ ಜ್ಞಾನವನ್ನು ವೃಧ್ದಿಸಿದರು.




ಮಕ್ಕಳುಅಧ್ಯಾಪಕರ ಜೊತೆಗೆ ಏತಡ್ಕದ ಸಾರ್ವಜನಿಕ ಗ್ರಂಥಾಲಯಕ್ಕೆ ಭೇಟಿ ನೀಡಿದರು. ಗ್ರಂಥಾಲಯದ ಅಧ್ಯಕ್ಷರಾದ ಕಳೆಯತ್ತೋಡಿ ಶ್ಯಾಮ್ ಭಟ್ ರವರ ಜೊತೆಗೆ ಮಕ್ಕಳು  ಸಂವಾದವನ್ನು ನಡೆಸಿದರು.ರು ಮಕ್ಕಳ ಪ್ರಶ್ನೆಗಳಿಗೆ ಸಮರ್ಪಕವಾಗಿಉತ್ತರಿಸಿದರು.




Saturday, 10 June 2017

Vidyarangam & Poet Kayyars Birthday Celebration






ವಿದ್ಯಾರ೦ಗ ಕಲಾಸಾಹಿತ್ಯ ವೇದಿಕೆ
  ವಿದ್ಯಾರ೦ಗ ಕಲಾಸಾಹಿತ್ಯ ವೇದಿಕೆ ಉದ್ಘಾಟನೆ ಮತ್ತು ಕವಿ ಕಯ್ಯಾರ ಕಿ೦ಞಣ್ಣ ರೈಗಳ ಜನ್ಮ ದಿನಾಚರಣೆಯನ್ನು ಜೂನ್ 8ರ೦ದು ಶಾಲೆಯಲ್ಲಿ ಆಚರಿಸಲಾಯಿತು ಅಧ್ಯಾಪಿಕೆ ಶ್ರೀಮತಿ ಸರೋಜ  ಎನ್ ಕೆ ಮಕ್ಕಳು ರಚಿಸಿದ ಭಿತ್ತಿಪತ್ರಿಕೆ ಸೃಜನಧಾರವನ್ನು ಬಿಡುಗಡೆಗೊಳಿಸಿ ವಿದ್ಯಾರ೦ಗ ಕಲಾಸಾಹಿತ್ಯ ವೇದಿಕೆಯನ್ನು ಉದ್ಘಾಟಿಸಿದರು. ಶಾಲಾ ಅಧ್ಯಾಪಕರಾದ ಶ್ರೀ ರಾಜರಾಮ ಕೆ. ವಿ. ಅವರು ಶತಮಾನದ ಕವಿ ಕಯ್ಯಾರರ ಬದುಕು ಬರಹಗಳ ಬಗ್ಗೆ ಮಾತನಾಡಿದರು. ಮಕ್ಕಳು, ಕಯ್ಯಾರರು ರಚಿಸಿದ ಹಾಡುಗಳನ್ನು ಹಾಡಿ ಮಹಾನ್ ಚೇತನವನ್ನು ಸ್ಮರಿಸಿದರು.ಅಧ್ಯಾಪಿಕೆ ಶ್ರೀಮತಿ ಸುಶೀಲ ವಿ ಪ್ರಾಸ್ತಾವಿಕ ಮಾತುಗಳನ್ನಾಡಿ ವಿದ್ಯಾರ೦ಗ ಕಲಾಸಾಹಿತ್ಯ ವೇದಿಕೆಯ ಚಟುವಟಿಕೆಗಳ ಸ್ಥೂಲ ಪರಿಚಯ ನೀಡಿದರು. ವಿದ್ಯಾರ್ಥಿಗಳಾದ ರಮ್ಯ. ಕೆ ಸ್ವಾಗತಿಸಿ, ಪ್ರಣವ್ ಬಿ ರೈ ವಂದಿಸಿದರು ಅರ್ಪಿತ ಕೆ ಕಾರ್ಯಕ್ರಮ ನಿರೂಪಿಸಿದಳು