FLASH NEWS

ಎಲ್ಲರಿಗೂ ಶುಭಾಶಯಗಳು

Saturday, 16 August 2014

Report

ಸ್ವಾತಂತ್ರ್ಯೋತ್ಸವ  2014
ಏತಡ್ಕ  ಎ ಯು ಪಿ ಶಾಲೆಯಲ್ಲಿ 68 ನೇ ಸ್ವಾತಂತ್ರ್ಯೋತ್ಸವವನ್ನು ವೈವಿಧ್ಯಮಯ ಕಾರ್ಯಕ್ರಮ  ಗಳೊಂದಿಗೆ  ವಿಜೃಂಭಣೆಯಿಂದ ಆಚರಿಸಲಾಯಿತು.ಪೂರ್ವಾಹ್ನ 09.30 ಕ್ಕೆ ಕುಂಬ್ಡಾಜೆ ಪಂಚಾಯತು ಉಪಾಧ್ಯಕ್ಷೆ ಶ್ರೀಮತಿ ಎಲಿಜಬೆತ್ ಕ್ರಾಸ್ತ ಧ್ವಜಾರೋಹಣೆ ಗೈದರು. ಶಾಲಾ ವಿದ್ಯಾರ್ಥಿಗಳು ಹೆತ್ತವರೊಂದಿಗೆ ಮೆರವಣಿಗೆ ಹೋದರು. ಸ್ವಾತಂತ್ರ್ಯ ಹೋರಾಟಗಾರರ ವೇಷ ಧರಿಸಿದ ಪುಟಾಣಿಗಳು ಮೆರವಣಿಗೆಗೆ ಕಳೆಯೇರಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವನ್ನು  ಕುಂಬ್ಡಾಜೆ ಪಂಚಾಯತು ಉಪಾಧ್ಯಕ್ಷೆ ಶ್ರೀಮತಿ ಎಲಿಜಬೆತ್ ಕ್ರಾಸ್ತ ಶಾಲಾ ವಿದ್ಯಾರ್ಥಿ ಗಳು ತಯಾರಿಸಿದ ಹಸ್ತ ಪತ್ರಿಕೆ “ಸ್ವಾತಂತ್ರ್ಯಕಹಳೆ” ಯನ್ನು ಬಿಡುಗಡೆ ಗೊಳಿಸಿ ಉದ್ಘಾಟಿಸಿದರು.  ಸ್ಥಳೀಯ ಪಂಚಾಯತು ಜನಪ್ರತಿನಿಧಿ ಶೈಲಜಾ ನಡುಮನೆ   ಸಮಾರಂಭದ ಅಧ್ಯಕ್ಷತೆ ವಹಿಸಿದರು.ಈ ಸಂದರ್ಭದಲ್ಲಿ ಮಕ್ಕಳಿಗೆ ಏರ್ಪಡಿಸಿದ  ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು. ಶಾಲಾ ಅಧ್ಯಾಪಕರು, ವಿದ್ಯಾರ್ಥಿಗಳು  ಶಾಲಾ ಪಿ ಟಿ ಎ ಅಧ್ಯಕ್ಷರಾದ ಮಧುಸೂಧನ ಪಳ್ಳತಮೂಲೆ, ಎಂ ಪಿ ಟಿ ಎ  ಅಧ್ಯಕ್ಷೆ ಗೌರಿ ಆನೆಪಳ್ಳ ಮೊದಲಾದವರು  ಸ್ವಾತಂತ್ರ್ಯದ ಮಹತ್ವದ ಬಗ್ಗೆ ಮಾತನಾಡಿದರು.  ಸ್ಥಳೀಯ ಪಂಚಾಯತು,ಹಾಗು ಸ್ಥಳೀಯರು ಕೊಡಮಾಡಿದ ಸಿಹಿತಿಂಡಿಯನ್ನು ವಿತರಿಸಲಾಯಿತು. ಪ್ರವೀಣ ಡಿ ಸೋಜ ನಿರೂಪಿಸಿದ ಕಾರ್ಯಕ್ರಮಕ್ಕೆ ಅಶ್ವತ್ ಸ್ವಾಗತಿಸಿ ನಿಶ್ಮಿತಾ ವಂದಿಸಿದಳು.


No comments:

Post a Comment