FLASH NEWS

ಎಲ್ಲರಿಗೂ ಶುಭಾಶಯಗಳು

Sunday, 20 December 2015

ನಾನೊ೦ದು ಪುಟ ಹಕ್ಕಿ
ನಾನೊ೦ದು ಪುಟ ಹಕ್ಕಿ              
ತಿನುವೆನು ಕಾಳನು ಹೆಕ್ಕಿ
ನೋಡುವೆನು ಬಾನ ಚುಕ್ಕಿ
 ಹಾಡುವೆನು ಚೈತನ್ಯ ಉಕ್ಕಿ
ಊರೂ ರು ಸುತ್ತುತ್ತಾ ನಾನು
ಹುಡುಕುವೆ ಎಲ್ಲೆಡೆ ಆಹಾರವನು
ಹಾರುತಾ ನಲಿಯೂತಾ ಬಾನಲ್ಲಿ
ಚಿಂತೆಯು ಇಲ್ಲ  ನಮಗಿಲ್ಲಿ
ಅನುದಿನ ಬರುತಿದೆ ಸಂತಸವು
ನಲಿಯುತಾ ಹಾರುತಾ ಸಾಹಸವು
ಹಾಡುತಾ ನಾವು ರಾಗದಿ ಸ್ವರವು
ಬೆಳಗಿನ ಸಮಯದಿ ಜನರನು ಎಬಿಸಿ ದಿನವು
ಗೂಡನು ಕಟುತ ಮರದಲಿ ಎಂದಿಗೂ
ಗೂಡಲಿ ನೆಲೆಸುವೆ ಕೊನೆವರೆಗೂ
ಮಳೆಯದು ಬರಲಿ ಸಿಡಿಲದು ಬರಲಿ
ಓಡುತಾ ಸಾಗುವೆ ಗೂಡಿನ ಮರೆಯಲಿ
ಮುಸ್ಸಂಜೆ ಹೊತ್ತಲ್ಲಿ ಗೂಡಿಗೆ ಸಾಗುವೆನು
ದೂರದ ಕೆಲಸವ ಮುಗಿಸುತಾ ಬರುವೆನು
ಸಂಜೆಯ ಹೊತ್ತಲಿ ರಾಗ ವ ನುಡಿಸುವೆನು
ಆತುರ ಹಿಡಿಸಿ ಮಲಗುವೆನು


                                      ಉಷಾಕುಮಾರಿ.ಕೆ.

No comments:

Post a Comment