FLASH NEWS

ಎಲ್ಲರಿಗೂ ಶುಭಾಶಯಗಳು

Sunday, 4 June 2017

ಶಾಲಾ ಪ್ರವೇಶೋತ್ಸವ



  1. 2017-18 ನೇ ಶೈಕ್ಷಣಿಕ ವರ್ಷದ ಶಾಲಾ ಪ್ರವೇಶೋತ್ಸವವು ವಿವಿಧ ಕಾರ್ಯಕ್ರಮಗಳೊಂದಿಗೆ  ವಿಜೃಂಭಣೆಯಿಂದ ಜರಗಿತು.. ಪ್ರವೇಶೋತ್ಸವದ ಉದ್ಘಾಟನೆಯನ್ನು ಶಾಲೆಗೆ ನೂತನವಾಗಿ ಸೇರ್ಪಡೆಗೊಂಡ ಮಕ್ಕಳಿಗೆ ಬ್ಯಾಗ್ ನೀಡುವ ಮೂಲಕ ಕುಂಬ್ಡಾಜೆ ಪಂಚಾಯತು ಅಧ್ಯಕ್ಷೆ  ಶ್ರೀಮತಿ ಫಾತಿಮತ್ ಸುಹರಾ ನೆರವೇರಿಸಿದರು. ಕುಂಬ್ಡಾಜೆ ಪಂಚಾಯತು ಸದಸ್ಯೆ ಎಲಿಜಬೆತ್ ಕ್ರಾಸ್ತಾ , ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ  ಶ್ರೀ ರವಿರಾಜ ಶರ್ಮ, ಮಾತೃ ಸಂಘದ ಅಧ್ಯಕ್ಷೆ  ಸೌಮ್ಯ ನೆಲ್ಲಿಮೂಲೆ, ಎಸ್.ಎಸ್.ಜಿ. ಸಂಘದ ಅಧ್ಯಕ್ಷ  ವೈ.ಕೆ. ಗಣಪತಿ ಭಟ್ , ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ   ಶ್ರೀ ಕೃಷ್ಣ  ಶರ್ಮಾ ಶುಭಾಶಂಸನೆಗೈದರು. ಶಾಲಾ ಪ್ರಬಂಧಕ ವೈ. ಶ್ರೀಧರ ಭಟ್ ಸ್ವಾಗತಿಸಿ, ಅಧ್ಯಾಪಿಕೆ ಎನ್.ಕೆ. ಸರೋಜ ಧನ್ಯವಾದ ಸಮರ್ಪಿಸಿದರು. ಅಧ್ಯಾಪಕ ರಾಜಾರಾಮ ಕೆ.ವಿ. ಕಾರ್ಯಕ್ರಮ  ನಿರೂಪಿಸಿದರು
    1.  


    .

No comments:

Post a Comment