ವಿಶ್ವ ಪರಿಸರ ದಿನ ಜೂನ್ 5
ಸಂಭ್ರಮ
ಸಂತಸ ಈ ದಿನ ಪುಟ್ಟ ಪುಟ್ಟ ಹೆಜ್ಜೆಗಳೇ ಮುಂದಿನ ಬಾಳ ಪಯಣಕ್ಕೆ
ರಹದಾರಿ ದೃಢವಾದ ಸಂಕಲ್ಪದಿಂದ ಭಾರತ ನಮ್ಮ ಹೆಮ್ಮೆ ತಾಯ್ನಾಡು,
ಬಾಹ್ಯಾಕಾಶ ಕ್ಷೇತ್ರದಲ್ಲಿ ಸಾಧನೆ ವಿಕ್ರಮಗೈದ ಈ ದಿನ ನಮ್ಮ ಏತಡ್ಕ ಎ.ಯು.ಪಿ.ಶಾಲೆಗೂ ಸಾಧನೆ ಗರಿ ಮೂಡಿಸಿದ್ದು ವಿಸ್ಮಯ
ಕಾಕತಾಳೀಯ ವಿಶ್ವ
ಪರಿಸರ ದಿನವಾದ ಜೂನ್ 5
ರಂದು ಬೆಳಗ್ಗೆ ಶಾಲಾ ಅಸೆಂಬ್ಲಿಯಲ್ಲಿ ಮಲೆ ಇದ್ದರೆ ಮಳೆ, ಮಳೆ ಇದ್ದರೆ ಬೆಳೆ,
ಬೆಳೆ ಇದ್ದರೆ ಇಳೆ ಎಂಬ ಘೋಷಣೆಯೊಂದಿಗೆ ಶುದ್ಧ ಪರಿಸರ ಶುಚಿತ್ವ ಭಾರತ,
ಆರೋಗ್ಯ ಭಾರತ ಎಂಬ ದೃಢ ಪ್ರತಿಜ್ಞೆಯನ್ನು ಶಾಲಾ
ಮುಖ್ಯೋಪಾಧ್ಯಾಯಿನಿಯವರ ಮುಖೇನ ಕೈಗೊಂಡ ನಮ್ಮ ಪುಟಾಣಿಗಳು ಹಸಿರು ಸಿರಿ ಸಂಚಿಕೆಯನ್ನು ತಯಾರಿಸಿ
ಸಭಾ ಕಾರ್ಯಕ್ರಮದಲ್ಲಿ ಸ್ಧಳೀಯ ಪಂಚಾಯತು ಸದಸ್ಯೆ ಶ್ರೀಮತಿ ಶೈಲಜಾ ನಡುಮನೆಯವರಿಂದ ಬಿಡುಗಡೆ
ಮಾಡಿಸಿದ ಕ್ಷಣ ನಮ್ಮ ಉಸಿರಾದರೆ ನಾಡು ಹಸಿರಾಗಿ ನಮ್ಮ ಸರ್ವಾಂಗೀಂಣ ಪ್ರಗತಿಗೆ ಪೂರಕ ಎಂದು ಕಿವಿಮಾತು
ಹೇಳಿದರು
ಬಳಿಕ ನಮ್ಮದೇ ಆದ ಸ್ಧಳದಲ್ಲಿ ಸುಂದರ ಹೂದೋಟ,
ಔಷಧಿ ವನ, ಫಲ ಗಿಡಗಳ ತೋಟ,
ಜೀವ ವೈವಿಧ್ಯ ಕೊಳ ನಿರ್ಮಿಸುವ ಅಮಿತೋತ್ಸವದಿಂದ
ಮಣ್ಣನ್ನು ಹೊನ್ನಾಗಿಸುವ ಪ್ರಯತ್ನಕ್ಕೆ ಚಾಲನೆ ನೀಡಿದರು.
ತಮ್ಮ ತಮ್ಮ ಮನೆಗಳಿಂದ ತಂದ ವಿವಿಧ ಜಾತಿಯ
ಗಿಡಗಳನ್ನು ನೆಡುವುದರ ಮೂಲಕ ಸಂಕಲ್ಪವನ್ನು ಸಾಕಾರಗೊಳಿಸುವ ಮೊದಲ ಹೆಜ್ಜೆಯನ್ನು ದೃಢವಾಗಿ
ಊರಿದರು. ನಮ್ಮ
ಮನೆ, ಶಾಲಾ
ಪರಿಸರ ಆರೋಗ್ಯ ಪೂರ್ಣವಾಗಿರಿಸಲು ಶುಚಿತ್ವ ಭಾರತ ನಿರ್ಮಾಣಕ್ಕೆ ಪ್ಲಾ ಸ್ಟಿಕ್ ನಿರಸನ
ಕಾರ್ಯಕ್ರಮಕ್ಕೂ ಚಾಲನೆ ನೀಡುತ್ತಾ ವಿಶ್ವ ಪರಿಸರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿದ್ದನ್ನು
ಊರವರು ಬೆರಗು ಕಣ್ಣಿನಿಂದ ವೀಕ್ಷಿಸಿ ಮಕ್ಕಳ ಬೆನ್ನು ತಟ್ಟಿ ದ್ದು ಶ್ಲಾಘನೀಯ. ಒಟ್ಟಿನಲ್ಲಿ
ವಿದ್ಯಾರ್ಥಿಗಳ ಕಾರ್ಯವೈಖರಿ ಎಲ್ಲರಿಗೂ ನೀಡಿದ ಹೊಸ ಪ್ರೇರಣೆ ಕನಸಿಗೆ ಗರಿ ಮೂಡಿಸುವುದರೊಂದಿಗೆ
ಕಾರ್ಯಕ್ರಮವು ಮುಕ್ತಾಯವಾಯಿತು




No comments:
Post a Comment