FLASH NEWS

ಎಲ್ಲರಿಗೂ ಶುಭಾಶಯಗಳು

Thursday 8 September 2016

SPOKEN ENGLISH CLASS

                          ಸ್ಪೋಕನ್ ಇಂಗ್ಲೀಷ್ ತರಬೇತಿ
                    
                      ದಿನಾ೦ಕ 03.09.2016 ಶನಿವಾರದಂದು ಶಾಲೆಯಲ್ಲಿ ಸ್ಪೋಕನ್ ಇಂಗ್ಲೀಷ್ ತರಬೇತಿ   ಆರಂಭಿಸಲಾಯಿತು.ಕು೦ಬ್ಡಾಜೆ ಗ್ರಾಮ ಪ೦ಚಾಯತ್ ಸದಸ್ಯೆ  ಶ್ರೀಮತಿ ಶೈಲಜಾ ನಡುಮನೆ   ತರಬೇತಿ ಉದ್ಘಾಟಿಸಿದರು.ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಿ.ಟಿ.ಎ.ಅಧ್ಯಕ್ಷರಾದ ಶ್ರೀ ರವಿರಾಜ ಶರ್ಮ ವಹಿಸಿ,ತರಬೇತಿಯ ಪ್ರಾಮುಖ್ಯತೆಯನ್ನು ತಿಳಿಸಿದರು. ಎ೦.ಪಿ.ಟಿ.ಎ.ಅಧ್ಯಕ್ಷೆ  ಶ್ರೀಮತಿ  ಸೌಮ್ಯ ನೆಲ್ಲಿಮೂಲೆ  ತರಬೇತಿಯ ಪ್ರಯೋಜನ ಪಡೆದುಕ್ಕೊಳ್ಳುವಂತೆ ಮಕ್ಕಳಿಗೆ ತಿಳಿಸಿ,ಶುಭ ಹಾರೈಸಿದರು.  ಶಾಲಾ ಎಸ್. ಎಸ್. ಜಿ . ಅಧ್ಯಕ್ಷರಾದ ಶ್ರೀ ಗಣಪತಿ ಭಟ್ ಭಾಗವಹಿಸಿ  ಶುಭ ಹಾರೈಸಿದರು. ಎ೦.ಪಿ.ಟಿ.ಎ. ಸದಸ್ಯೆ ಹಾಗು ಕು೦ಬ್ಡಾಜೆ ಗ್ರಾಮ ಪ೦ಚಾಯತ್ ಸದಸ್ಯೆ  ಶ್ರೀಮತಿ ಎಲಿಜಬೆತ್ ಕ್ರಾಸ್ತ    ಶುಭ ಹಾರೈಸಿದರು.ಶ್ರೀಮತಿ ವಿದ್ಯಾ ಟೀಚರು ಮತ್ತು ಶ್ರೀ ಮಹೇಶ ಏತಡ್ಕ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದರು.ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸರೋಜ .ಪಿ. ಸ್ವಾಗತಿಸಿ,ಅಧ್ಯಾಪಿಕೆ ಶ್ರೀಮತಿ ಸರೋಜ ಎನ್.ಕೆ.   ವಂದಿಸಿದರು. ಅಧ್ಯಾಪಕರೂ,ರಕ್ಷಕರೂ ಮತ್ತು ಮಕ್ಕಳು  ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.