FLASH NEWS

ಎಲ್ಲರಿಗೂ ಶುಭಾಶಯಗಳು

Monday 10 October 2016

Sharada Mahostava Nadahabba

                                  ಶ್ರೀ    ಶಾರದಾ ಮಹೋತ್ಸವ
               ದಿನಾಂಕ 11.10.2016 ಮಂಗಳವಾರದ೦ದು ಶಾರದಾ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು, ಈ ಸಂದರ್ಭದಲ್ಲಿ ಶಾಲಾ ಮಕ್ಕಳಿಂದ ಶ್ರೀಕೃಷ್ಣ ಪರಂಧಾಮ ಎ೦ಬ ಯಕ್ಷಗಾನ ತಾಳಮದ್ದಳೆ ಜರಗಿತು.7ನೇ ತರಗತಿಯ ಅಪೇಕ್ಷಾ,ಮತ್ತು ಆರನೇ ತರಗತಿ ಅರ್ಪಿತಾ,ಶ್ರೀಕೃಷ್ಣನ ಪಾತ್ರದಲ್ಲಿ, 7ನೇ ತರಗತಿಯ ಪ್ರಜ್ವಲ್ ಅರ್ಜುನನ ಪಾತ್ರದಲ್ಲಿ,ಗಾನ ಸಮೃದ್ಧಿ ಜರನ ಪಾತ್ರದಲ್ಲಿ, ಪ್ರಜೀಷ ಮತ್ತು ವೈಶಾಲಿ ಯಾದವರ ಪಾತ್ರದಲ್ಲಿ, ದುರ್ವಾಸ ಮುನಿಗಳಪಾತ್ರದಲ್ಲಿ ಶ್ರೀಜಿತ್, ಬಲರಾಮನ ಪಾತ್ರದಲ್ಲಿ, ಅಖಿಲೇಶ ಕೆ.ವಿ. ಉದ್ದವನ  ಪಾತ್ರದಲ್ಲಿ ರಮ್ಯ.ಕೆ.,ನಾರದರ  ಪಾತ್ರದಲ್ಲಿ ಗ್ರೀಷ್ಮ ಮತ್ತು ಯಶೋದೆಯಪಾತ್ರದಲ್ಲಿ ಶ್ರಾವ್ಯ ಕೆ.ಎಸ್. ಮಿಂಚಿದರು. ಪುಟಾಣಿ ಚಿಣ್ಣರಿಗೆ ಅಕ್ಷರಾಭ್ಯಾಸ ನಡೆಸಲಾಯಿತು.  ಶ್ರೀ  ಶಾರದಾ ಮಾತೆಯನ್ನು ಪೂಜಿಸಲಾಯಿತು.ಅಧ್ಯಾಪಕರೂ,ರಕ್ಷಕರೂ ಮತ್ತು ಮಕ್ಕಳು ಎಲ್ಲಾ
ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು.