FLASH NEWS

ಎಲ್ಲರಿಗೂ ಶುಭಾಶಯಗಳು

Thursday 12 October 2017

ವಿದ್ಯಾರಂಗ ಕಲಾಸಾಹಿತ್ಯ ವೇದಿ ಅವಿಲು ಗೋಷ್ಠಿ

             ವಿದ್ಯಾರಂಗ ಕಲಾಸಾಹಿತ್ಯ ವೇದಿ ಆಶ್ರಯದಲ್ಲಿ ಚುಟುಕು ರಚನಾ ಶಿಬಿರ ಶ್ರೀ ಕಕ್ಕೆಪ್ಪಾಡಿ ಶಂಕರನಾರಾಯಣ ಭಟ್ಟರವರಿಂದ

Monday 2 October 2017

ದಸರಾ ನಾಡಹಬ್ಬ ಹಾಗು ಶ್ರೀ ಶಾರದಾ ಮಹೋತ್ಸವ

               ದಸರಾ ನಾಡಹಬ್ಬ ಶಾರದಾ ಮಹೋತ್ಸವ ಆಚರಣೆ
ಏತಡ್ಕ ಎ.ಯು.ಪಿ. ಶಾಲೆಯಲ್ಲಿ ದಿನಾಂಕ 30.09.2017 ಶನಿವಾರದ೦ದು ದಸರಾ ನಾಡಹಬ್ಬವನ್ನು ಮತ್ತು ಶಾರದಾ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು, ಶಾಲಾ ಮಕ್ಕಳಿಂದ ಗದಾಯುದ್ಧ ಎ೦ಬ ಯಕ್ಷಗಾನ ತಾಳಮದ್ದಳೆ ಜರಗಿತು. ಚಿಣ್ಣರು ಅರ್ಥವಾದಿಗಳಾಗಿ, ವೀರ,ಹಾಸ್ಯ ,ಕರುಣಾ ರಸಗಳನ್ನು ತಮ್ಮ ಭಾವ ಪ್ರತಿಪಾದನೆಯಲ್ಲಿ ಯಶಸ್ವಿಯಾದರು. ಅರ್ಪಿತಾ, ರಮ್ಯ, ಗ್ರೀಷ್ಮಾ,ಅನುಷಾನಾಥ್,ಮೊದಲಾದ ವಿದ್ಯಾರ್ಥಿಗಳು ಪ್ರಧಾನ ಭೂಮಿಕೆಯಲ್ಲಿ ರಂಗ ವೈಭವೀಕರಿಸಿದರು. ಬಳಿಕ ಶ್ರೀ ಲಕ್ಷ್ಮೀಶ ಕಡಂಬಳಿತ್ತಾಯರ ನೇತ್ರತ್ವದಲ್ಲಿ ಶಾರದಾ ಮಾತೆಯನ್ನು ಪೂಜಿಸಲಾಯಿತು ಹಾಗು ಚಿಣ್ಣರಿಗೆ ವಿದ್ಯಾರಂಭ ಕಾರ್ಯಕ್ರಮ ನಡೆಯಿತು. ಪುಸ್ತಕ ಪೂಜೆಯ ನಂತರ ಪ್ರಸಾದ ಸ್ವೀಕರಿಸಿ, ತಮ್ಮ ಪುಸ್ತಕ ಓದಿದರು.
ಅಪರಾಹ್ನ ನಾಡಹಬ್ಬ ಕಾರ್ಯಕ್ರಮ ಜರಗಿತು. ಶಾಲಾ ಮಕ್ಕಳಿಗಾಗಿ ನಾಡ ಗೀತೆ,ಜಾನಪದ ಗೀತೆ ಸ್ಪರ್ಧೆಗಳು ನಡೆದುವು. ಸಭಾ ಕಾರ್ಯಕ್ರಮ ದ ಅಧ್ಯಕ್ಷತೆಯನ್ನು ಶ್ರೀ ಕಿಶೋರ್ ಕುಂಡಾಪು ವಹಿಸಿದ್ದು, ಮುಖ್ಯ ಅತಿಥಿಗಳಾಗಿ ಶ್ರೀ ಬೇ. ಸೀ. ಗೋಪಾಲ ಕೃಷ್ಣ ಭಟ್ ಭಾಗವಹಿಸಿದ್ದರು. ಇಂದಿನ ಹಾಗು ಹಿಂದಿನ ಕಾಲದ ನಾಡಹಬ್ಬ ಆಚರಣೆಯ ಮಹತ್ವವನ್ನು ವಿವರಿಸಿದರು ಮತ್ತು ಕಾಸರಗೋಡಿನ ಈನೆಲದಲ್ಲಿ ದಸರಾ ನಾಡಹಬ್ಬ ಕನ್ನಡಿಗರ ಏಕೀಕರಣಕ್ಕೆ ಸೂಕ್ತ ವೇದಿಕೆ ಎ೦ದರು.ವಿದ್ಯಾರ್ಥಿಗಳಿಂದ ವೈವಿಧ್ಯಮಯ ನಾಡ ಗೀತೆಗಳ ಗಾಯನ ಮನರಂಜಿಸಿತು. ನಿವೃತ್ತ ಅಧ್ಯಾಪಕ ಶ್ರೀ ಎ೦. ಗೋಪಾಲ ಕೃಷ್ಣ ಭಟ್ ಅವರ ಜಾನಪದ ಗೀತೆ ಗಾಯನ ಸಭಿಕರನ್ನು ಭಾವುಕರನ್ನಾಗಿಸಿತು.ಹಿರಿಯರಾದ ಸಾವಿತ್ರಿ.ಕೆ.ಭಟ್ ತಮ್ಮ ಹಾಡಿನ ಮೂಲಕ ಶುಭ ಹಾರೈಸಿದರೆ, ಶ್ರೀಮತಿ ಸೌಮ್ಯ ನೆಲ್ಲಿಮೂಲೆ ತಮ್ಮ ಮಾತುಗಳ ಮೂಲಕ ಶುಭ ಹಾರೈಸಿದರು.ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.ಹೀಗೆ ಹಲವು ಕಾರ್ಯಕ್ರಮಗಳಿಂದ ಕನ್ನಡದ ಕಂಪನ್ನು ಸೂಸಿ ನಾಡಹಬ್ಬ ಕಾರ್ಯಕ್ರಮ ಸಂಪನ್ನಗೊಂಡಿತು.

                                    ದಸರಾ ನಾಡ ಹಬ್ಬ ಹಾಗು ಶ್ರೀ ಶಾರದಾ ಮಹೋತ್ಸವ