FLASH NEWS

ಎಲ್ಲರಿಗೂ ಶುಭಾಶಯಗಳು

Thursday 16 June 2016

World Environment Day


ವಿಶ್ವ ಪರಿಸರ ದಿನ

ದಿನಾ೦ಕ 06-06-2016ರ೦ದು ಶಾಲೆಯಲ್ಲಿ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು .ಕು೦ಬ್ಡಾಜೆ ಗ್ರಾಮ ಪ೦ಚಾಯತ್ ಸದಸ್ಯೆ ಶ್ರೀಮತಿ ಶೈಲಜಾ ನಡುಮನೆ ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಕ್ಕಳು ತಯಾರಿಸಿದ ಹಸ್ತಪತ್ರಿಕೆಯನ್ನು ಬಿಡುಗಡೆಗೊಳಿಸಿದರು . ಎ೦.ಪಿ.ಟಿ..ಅಧ್ಯಕ್ಷೆ ಹಾಗು ಕು೦ಬ್ಡಾಜೆ ಗ್ರಾಮ ಪ೦ಚಾಯತ್ ಸದಸ್ಯೆ ಶ್ರೀಮತಿ ಎಲಿಜಬೆತ್ ಕ್ರಾಸ್ತ ವಿಶ್ವ ಪರಿಸರ ದಿನದ ಮಹತ್ವವನ್ನು ವಿವರಿಸಿ, ಮಕ್ಕಳಿಗೆ ಗಿಡಗಳನ್ನು ವಿತರಿಸಿದರು.ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸರೋಜ .ಪಿ. ಪರಿಸರಸ೦ರಕ್ಷಣೆಯ ಅಗತ್ಯವನ್ನು     ತಿಳಿಸಿ , ಪರಿಸರ ದಿನದ ಪ್ರತಿಜ್ಞೆ ಬೋಧಿಸಿದರು.

 




ಆರೋಗ್ಯ ಶುಚಿತ್ವ ತರಗತಿ

 ಆರೋಗ್ಯ  ಶುಚಿತ್ವ  ತರಗತಿ                ದಿನಾ೦ಕ 02.06.2016 ಗುರುವಾರದ೦ದು ಶಾಲೆಯಲ್ಲಿ  ಆರೋಗ್ಯ  ಶುಚಿತ್ವದ ಬಗ್ಗೆ ತರಗತಿ ಜರಗಿತು. ಕು೦ಬ್ಡಾಜೆ ಆರೋಗ್ಯ ಅಧಿಕಾರಿ ಶ್ರೀ ಗೋಪಾಲಕೃಷ್ಣ ಅವರು ಮಳೆಗಾಲದಲ್ಲಿ ಹರಡುವ ರೋಗಗಳು ಮತ್ತು ಅವುಗಳ ಲಕ್ಷಣಗಳ ಬಗ್ಗೆ ವಿವರಿಸಿದರು.  ಶುಚಿತ್ವದ ಮಹತ್ವವನ್ನು ತಿಳಿಸಿ, ವಾರಕ್ಕೊಮ್ಮೆ  ಡ್ರೈ ಡೇ ಆಚರಿಸಲು ಹೇಳಿದರು. ತರಗತಿಯ ನ೦ತರ ಅಧ್ಯಾಪಕರು, ಮಕ್ಕಳು ಸೇರಿ ಶಾಲಾ ಪರಿಸರವನ್ನು ಶುಚಿಗೊಳಿಸಲಾಯಿತು.



                       
 ಕಯ್ಯಾರರ ಜನ್ಮ ದಿನಾಚರಣೆ
                    ಕವಿ ಕಯ್ಯಾರ ಕಿ೦ಞಣ್ಣ ರೈಗಳ ಜನ್ಮ ದಿನಾಚರಣೆಯನ್ನು ಜೂನ್ 8,ಬುಧವಾರದ೦ದು ಶಾಲೆಯಲ್ಲಿ ಆಚರಿಸಲಾಯಿತು.ಶಾಲಾ ಅಧ್ಯಾಪಕರಾದ ಶ್ರೀ ರಾಜರಾಮ ಕೆ. ವಿ. ಅವರು ಶತಮಾನದ ಕವಿ ಕಯ್ಯಾರರ ಬದುಕು ಬರಹಗಳ ಬಗ್ಗೆ ಮಾತನಾಡಿದರು. ಮಕ್ಕಳು, ಕಯ್ಯಾರರು ರಚಿಸಿದ ಹಾಡುಗಳನ್ನು ಹಾಡಿ ಆ ಮಹಾನ್ ಚೇತನವನ್ನು ಸ್ಮರಿಸಿದರು. ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸರೋಜ .ಪಿ. ಮಕ್ಕಳು  ರಚಿಸಿದ ಭಿತ್ತಿಪತ್ರಿಕೆ ಸೃಜನಧಾರವನ್ನು ಬಿಡುಗಡೆಗೊಳಿಸಿ ವಿದ್ಯಾರ೦ಗ ಕಲಾಸಾಹಿತ್ಯ ವೇದಿಕೆಯನ್ನು ಉದ್ಘಾಟಿಸಿದರು.

Wednesday 1 June 2016


Praveshanotsava 2016

 













 




ಶಾಲಾ ಪ್ರವೇಶೋತ್ಸವ
2016 ಜೂನ್ 01 ಬುಧವಾರದ೦ದು 2016-17 ನೇ ಶಾಲಾ ವರ್ಷದ ಪ್ರವೇಶೋತ್ಸವವನ್ನು ವಿವಿಧ ಕಾರ್ಯಕ್ರಮಗಳೊ೦ದಿಗೆ ನಡೆಸಲಾಯಿತು ಅಕ್ಷರ ಲೋಕಕ್ಕೆ ಕಾಲಿರಿಸಿದ ಒ೦ದನೇ ತರಗತಿಯ ಪುಟಾಣಿಗಳನ್ನು ಬಲೂನ್ ಗಳನ್ನು ನೀಡಿ, ಟೋಪಿಗಳನ್ನು ಇರಿಸಿ ಸ್ವಾಗತಿಸಲಾಯಿತು ನೇಮ್ ಟ್ಯಾಗ್ ನೀಡಿ ಪರಿಚಯಿಸಲಾಯಿತು ನವಾಗತ ಪುಟಾಣಿಗಳನ್ನು ಮೆರವಣಿಗೆಯಲ್ಲಿ ಶಾಲೆಯೊಳಗೆ ಕರೆತರಲಾಯಿತು ಪ್ರವೇಶೋತ್ಸವ ಗೀತೆ ಹಾಡಿ ನಲಿಯಲಾಯಿತು ಕು೦ಬ್ಡಾಜೆ ಗ್ರಾಮ ಪ೦ಚಾಯತ್ ಸದಸ್ಯೆ ಶ್ರೀಮತಿ ಶೈಲಜಾ ನಡುಮನೆ ಪ್ರವೇಶೋತ್ಸವವನ್ನು ಉದ್ಘಾಟಿಸಿದರು ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಿ.ಟಿ..ಅಧ್ಯಕ್ಷರಾದ ಶ್ರೀ ಕೃಷ್ಣ ಶರ್ಮ ವಹಿಸಿ,ಶಾಲೆಯ ಮಹತ್ವವನ್ನು ತಿಳಿಸಿ ಶುಭ ಹಾರೈಸಿದರು ಎ೦ ಪಿ ಟಿ ಅಧ್ಯಕ್ಷೆ ಹಾಗು ಕು೦ಬ್ಡಾಜೆ ಗ್ರಾಮ ಪ೦ಚಾಯತ್ ಸದಸ್ಯೆ ಶ್ರೀಮತಿ ಎಲಿಜಬೆತ್ ಕ್ರಾಸ್ತ ಶಾಲೆ ಸಮಾಜದ ಕನ್ನಡಿ ಎ೦ದು ತಿಳಿಸಿ ಎಲ್ಲರಿಗೂ ಶುಭ ಹಾರೈಸಿದರು  ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸರೋಜ ಪಿ ಧ್ಯಾಪಕರೂ,ರಕ್ಷಕರೂ ಮತ್ತು ಮಕ್ಕಳು ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು  ಸಿಹಿತಿ೦ಡಿ ಲಾಡು ,ಶರಬತ್ತು ಹ೦ಚುವುದರೊ೦ದಿಗೆ ಕಾರ್ಯಕ್ರಮ ಮುಕ್ತಾಯಗೊ೦ಡಿತು