FLASH NEWS

ಎಲ್ಲರಿಗೂ ಶುಭಾಶಯಗಳು

Tuesday 28 March 2017

SHASTROSTAVA

                                                                           ವಿಜ್ಞಾನೋತ್ಸವ
                                                             ಎ.ಯು.ಪಿ.ಶಾಲೆ.ಏತಡ್ಕ    10.03.2017
ನಮ್ಮಎ.ಯು.ಪಿ.ಶಾಲೆಯಲ್ಲಿ201617ನೇವಷ೯ದವಿಜ್ಞಾನೋತ್ಸವತಾರೀಕು10.3.2017.ಶುಕ್ರವಾರದಂದು ಬಹಳ ಸಂಭ್ರಮದಿಂದ ನೆರವೇರಿತು.  ದೈನಂದಿನ ಚಟುವಟಿಕೆಗಳಲ್ಲಿ ಬಳಸಲಾಗುವ ವಿಜ್ಞಾನ   ಜ್ಞಾನದ ಮುಖ್ಯ ಆಕರವೂ ಹೌದು.ಆಕಷ೯ಣೆಯಾಗಿಯೂ ಇದೆ ಎಂಬುದನ್ನು ಈ ಕಾಯ೯ಕ್ರಮವು ನಿರೂಪಿಸಿತು..
ಶಾಲಾ ಆಟದ ಬಯಲಲ್ಲಿ ನಮ್ಮೀ ಶಾಲೆಯ  ರಕ್ಶಕ ಶಿಕ್ಶಕ ಸಂಘದ ಅಧ್ಯಕ್ಶ ರವಿರಾಜಶಮ೯.ಕೆ.ಅವರು ರಾಕೆಟ್ ಉಡಾಯಿಸಿ ಕಾಯ೯ಕ್ರಮವನ್ನು ಔಪಚಾರಿಕವಾಗಿ  ಉದ್ಘಾಟಿಸಿದರು.




ಮಕ್ಕಳಲ್ಲಿರುವ ಪ್ರತಿಭೆಗಳು ಮೆರುಗುಪಡೆದುಕೊಳ್ಳುವಲ್ಲಿ ಇಂತಹ ಉತ್ಸವಗಳು ದಾರಿದೀಪ ಎಂದು ಅಭಿಪ್ರಾಯಿಸಿದರು.ತದ ನಂತರ 5ರಿಂದ7ನೇ ತರಗತಿಯ ಮಕ್ಕಳಿಗೆ ವಿಜ್ಞಾನೋತ್ಸವದ ವಿವಿಧ ಚಟುವಟಿಕೆಗಳು ಆರಂಭಗೊಂಡುವು. .ಸಂಪನ್ಮೂಲ ವ್ಯಕ್ತಿಗಳಾಗಿ ಶಾಲಾ ಅಧ್ಯಾಪಕರಾದ ಶ್ರೀಮತಿ ಸರೋಜ.ಎನ್.ಕೆ.ಹಾಗೂ ಸುಬ್ರಹ್ಮಣ್ಯ ಭಟ್.ಕೆ.ಕಾಯ೯ ನಿವ೯ಹಿಸಿದರು.
ವಿವಿಧ ಚಲನೆಗಳು,ಸಾಮ್ಯತೆ ವ್ಯತ್ಯಾಸ ತಿಳಿಯುವ ವಿವಿಧ ಪ್ರಯೋಗಗಳನ್ನು ತಾವೇ ಸ್ವತಃ ಮಾಡಿ ಅನುಭವ ಗಳಿಸಿದರು.ಊಹೆ,ಮಂಡನೆ,ಚಚೆ೯,ನಿಗಮನ ಎಂಬೀ ಹಂತಗಳಲ್ಲಿ ಚಟುವಟಿಕೆಯನ್ನು ಸಮಗ್ರವಾಗಿ ನಿವ೯ಹಿಸಲು ಸಾಧ್ಯವಾಯಿತು.ವಿಜ್ಞಾನಿಗಳ ಹೆಸರಿನಲ್ಲಿ ವಿವಿಧ ಗುಂಪುಗಳಲ್ಲಿ ಈ ಎಲ್ಲಾ ಚಟುವಟಿಕೆಗಳು ನಡೆದುವು.
 

 
ವಾಯುವಿನಲ್ಲಿ ಚಲಿಸುವ ಬಲೂನ್,ಚಲಿಸುವ ಬೋಟ್ ಚಟುವಟಿಕೆಗಳ ಮೋಜು ವಿವರಿಸಲು  ಅವಣೀ೯ಯವಾದರೂ,ಮಕ್ಕಳ ಜ್ಞಾನ ತೃಷೆಗೆ ಉತ್ತಮ ಪೇಯವಾಗಿ ಒದಗಿದ್ದಂತೂ ಸತ್ಯ.ನೆಲಚಕ್ರದ ತಿರುಗುವಿಕೆ ವಿವಿಧ  ಚಲನೆಗಳ ತಿಳುವಳಿಕೆಗೆ ಪ್ರೇರಕವಾಯಿತು.
ಮಕ್ಕಳು ಅಂದು ತಯಾರಿಸಿದ ಉಪಕರಣಗಳು ಆಕಷ೯ಕವಾಗಿದ್ದಲ್ಲದೆ ಹೆಚ್ಚಿನ ಬೋಧಪ್ರದವಾಗಿತ್ತು  ಎಂಬುದು  ಸ್ತುತ್ಯಹ೯ ವಿಚಾರ. 3.30.ಕ್ಕೆ ಶಿಬಿರಕ್ಕೆ ಮಂಗಳ ಹಾಡಿದ ನಂತರ ವಿ ಜ್ಞಾನೋತ್ಸವ  ಸಮಾರೋಪ   ಸಮಾರಂಭವು  ನಮ್ಮ ನೆರೆ ವಾಡಿ೯ನ ಜನಪ್ರತಿನಿಧಿ ಶ್ರೀಮತಿ ಎಲಿಜಬೆತ್ ಕ್ರಾಸ್ತ  ಅಧ್ಯಕ್ಶತೆಯಲ್ಲಿ  ಜರಗಿತು. ಕೃಷ್ಣಶಮ೯.ಜಿ,ವೈ.ಕೆ.ಗಣಪತಿ ಭಟ್.ಈಶ್ವರಮೂಲ್ಯ.ಕೆ, ಮುಖ್ಯೋಪಾಧ್ಯಾಯಿನಿ  ಸರೋಜ.ಪಿ. ಅಧ್ಯಾಪಕವೃಂದ ಹಾಗೂ ವಿದ್ಯಾಥಿ೯ಗಳು ಕಾಯ೯ಕ್ರಮದಲ್ಲಿ   ಉಪಸ್ಥಿತರಿದ್ದರು.