FLASH NEWS

ಎಲ್ಲರಿಗೂ ಶುಭಾಶಯಗಳು

Tuesday 24 March 2015

ಗಣಿತ ಸಹವಾಸ ಶಿಬಿರ

ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಏತಡ್ಕ

ಗಣಿತ ಸಹವಾಸ ಶಿಬಿರ

ಉದ್ಘಾಟನೆ

ದಿನಾಂಕ 06.03.2015 & 07.03.2015 ರಂದು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಏತಡ್ಕ ದಲ್ಲಿ ಗಣಿತ ಸಹವಾಸ ಶಿಬಿರ ವಿವಿಧ ಕಾಯ೯ಕ್ರಮಗ ಳೊಂದಿಗೆ ಜರಗಿತು. ಕುಂಬ್ಡಾಜೆ ಪಂಚಾಯತು ಉಪಾಧ್ಯ ಕ್ಷೆ ಶ್ರೀಮತಿ ಎಲಿಜಬೆತ ಕ್ರಾಸ್ತ ಸೇರಿನಲ್ಲಿ ಅಕ್ಕಿ ಅಳೆದು ಉದ್ಘಾಟನೆಮಾಡಿದರು. ಮಾತ್ೃಸಂಫ ಅಧ್ಯಕ್ಷೆ ಶ್ರೀಮತಿ ಗೌರಿ ಅಧ್ಯ ಕ್ಷತೆ ವಹಿಸಿದರು.

ಗತ ಕಾಲದ ಗಣಿತ ವೈಭವ ಮೇಳೈಸೆ
ಹಳೆ ಬೇರು ಹೊಸ ಚಿಗುರು ಸಮ್ಮಿಳಿಸೆ

ಕಳಸೆ ಪರೆ ರಾತಲು ಮೊದಲಾದ ಹಿಂದಿನ ಕಾಲದ ಅಳತೆ ಉಪಕರಣಗಳನ್ನು ಪರಿಚಯಿಸಿ , ಅವುಗ ಳೊಳ ಗಿನ ಸಂಬಂಧವನ್ನು ವಿವರಿಸಲಾಯಿತು. ಮಕ್ಕಳು ಆಸಕ್ತಿಯಿಂದ ಉಪಕರಣಗಳನ್ನು ವೀಕ್ಭಿಸಿದರು.

ರಸಪ್ರಶ್ನೆ ಸ್ಪಧೆ೯

ಮಕ್ಕಳ ಬುದ್ಧಿ ಚರುಕು ಗೊಳಿಸುವ ರಸಪ್ರಶ್ನೆ ಸ್ಪಧೆ೯ ಏಪ೯ಡಿಸಲಾಯಿತು

ಕಾಗದಕ್ಕೆ ಕತ್ತರಿ ಪ್ರಯೋಗ
ಗಣಿತ ಆಕೃತಿಗಳಿಗೆ ಬಂತೊಂದು ಸುಯೋಗ.

ಟಾನ್ ಗ್ರಾಮ್ ಪರಿಚಯಿಸಿ ಮಕ್ಕಳಿಂದ ಟಾನ್ ಗ್ರಾಮ್ ರಚಿಸಲಾಯಿತು.

ಪ್ರಕೃತಿಯ ಮಡಿಲಲ್ಲಿ ಲೆಕ್ಕಾಚಾರದ ನಡಿಗೆ
 
ಪ್ರಕೃತಿ ಮತ್ತು ಗಣಿತದ ನಡುವಿನ ಸಂಬಂಧವನ್ನು ತಿಳಿಯುವ ಪ್ರಕ್ೃತಿ ಗಣಿತ
ಭಾಗವಾಗಿ ಎತ್ತರದ ಗುಡ್ಡಕ್ಕೆ ಹೋಗಿ ಪ್ರಕೃತಿಯಲ್ಲಿ ಗಣಿತ ಸಮ್ಮಿಳಿತವಾಗಿರುವುದನ್ನು ಅರಿತುಕೊಂಡರು.
 
ಆಕೃತಿ ಮಾದರಿ ನಿಮಾ೯ಣ ಆಟ ಸಹವಾಸಗಳಿಂದ
ಗಣಿತ ಕ್ಕೊಂದು ಹೊಸಯಾನ
 
ಮಕ್ಕಳು ತಮ್ಮ ಪಾಠಭಾಗದಲ್ಲಿ ಬರುವ ಕಲಿ ಕೋತ್ಪನ್ನಗಳನ್ನು ತಯಾರಿಸಿದರು.

ಬಹುಮುಖ ಪ್ರತಿಭೆ ಸಿ ಎಸ್ ನಂಬಿಯಾರ್
ಕೈಚಳಕದಿ ಗಣಿತದ ಮೇಳ

ಶ್ರಿ ಚಂದ್ರ ಶೇಖರ ನಂಬಿಯಾರ್ ಮೋಜಿನ ಗಣಿತ, ಹಾಗು ಗಣಿತ ಆಟ ಪ್ರಸ್ತುತಪಡಿಸಿ ಮಕ್ಕಳಿಗೆ ಗಣಿತ ಆಸಕ್ತಿದಾಯಕ ವಿಷಯ ನ್ನುವುದನ್ನು ಮನದಟ್ಟು ಮಾಡಿದರು.

ಸಮಾರೋಪ ಸಮಾರಂಭ

ಗಣಿತ ಸಹವಾಸ ಶಿಬಿರದ ಸಮಾರೋಪ ಸಮಾರಂಭವನ್ನು ಸ್ಥಳೀಯ ಪಂಚಾಯತು ಜನಪ್ರತಿನಿಧಿ
ಶ್ರೀಮತಿ ಶೈಲಜ ಉಧ್ಫಾಟಿಸಿ ಅಧ್ಯಕ್ಷತೆಯನ್ನು ಶಾಲಾ ಪಿ ಟಿ ಅಧ್ಯಕ್ಷ ಮಧುಸೂಧನ ಪಳ್ಳತಮೂಲೆ ವಹಿಸಿ ಶ್ರೀಮತಿ ಗಂಗಾರತ್ನ ಹಸ್ತಪತ್ರಿಕೆ ಅಳತೆ ಗೋಲ್ ಮತ್ತು ಮಕ್ಕಳ ಗಣಿತಾನುಭ ವವನ್ನು ಬಿಡುಗಡೆ ಗೊಳಿಸಿದರು. ಶ್ರಿ ಚಂದ್ರ ಶೇಖರ ನಂಬಿಯಾರ್ ರಸಪ್ರಶ್ನೆ ಸ್ಪಧೆ೯ ವಿ ಜೇತರಿಗೆ ಬಹುಮಾನ ನೀಡಿದರು.
ಮಕ್ಕಳುಉತ್ಸಾಹದಿಂದ ಭಾಗವಹಿಸುವುದ ರೊಂದಿಗೆ ರಕ್ಷಕ ಶಿಕ್ಷಕರ ಪ್ರೋತ್ಸಾಹ ದೊಂದಿಗೆ ಗಣಿತ ಸಹವಾಸ ಶಿಬಿರ ಸಂಪನ್ನಗೊಂಡಿತು.

No comments:

Post a Comment