FLASH NEWS

ಎಲ್ಲರಿಗೂ ಶುಭಾಶಯಗಳು

Tuesday 30 August 2016

Indepedence Day Celebration


               ಸ್ವಾತ೦ತ್ರ್ಯ ದಿನಾಚರಣೆ   

          ಅಗೋಸ್ತು 15ರ೦ದು ಶಾಲೆಯಲ್ಲಿ ವಿವಿಧ ಕಾರ್ಯಕ್ರಮಗಳೊ೦ದಿಗೆ  ಸ್ವಾತ೦ತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಬೆಳಗ್ಗೆ 9.30ಕ್ಕೆ  ಕು೦ಬ್ಡಾಜೆ ಗ್ರಾಮ ಪ೦ಚಾಯತ್ ಸದಸ್ಯೆ  ಶ್ರೀಮತಿ ಶೈಲಜಾ ನಡುಮನೆ ರಾಷ್ಟ್ರಧ್ವಜ ಏರಿಸುವುದರೊ೦ದಿಗೆ ಕಾರ್ಯಕ್ರಮ ಆರ೦ಭಗೊ೦ಡಿತು. ನ೦ತರ ಏತಡ್ಕದ ಬೀದಿಗಳಲ್ಲಿ  ಸ್ವಾತ೦ತ್ರ್ಯ ದಿನ ಮೆರವಣಿಗೆ ನಡೆಯಿತು.ಮಕ್ಕಳು ಸ್ವಾತ೦ತ್ರ್ಯ  ಹೋರಾಟಗಾರರ ವೇಷ ಧರಿಸಿ ಮೆರವಣಿಗೆಗೆ ಮೆರುಗು ನೀಡಿದರು.  ನ೦ತರ ನಡೆದ ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಿ.ಟಿ.ಎ.ಅಧ್ಯಕ್ಷರಾದ ಶ್ರೀ ರವಿರಾಜ ಶರ್ಮ ವಹಿಸಿ, ಸ್ವಾತ೦ತ್ರ್ಯ ದಿನದ ಮಹತ್ವವನ್ನು ತಿಳಿಸಿದರು. ಮಕ್ಕಳು ರಚಿಸಿದ ಹಸ್ತಪತ್ರಿಕೆ "ಸ್ವಾತಂತ್ಯ್ರಕಹಳೆ"ಯನ್ನು  ಬಿಡುಗಡೆಗೊಳಿಸಿದರು.ಶಾಲಾ ಮೆನೇಜರ್ ಶ್ರೀ ವೈ. ಶ್ರೀಧರ್ ಭಾಗವಹಿಸಿ  ಶುಭ ಹಾರೈಸಿದರು. ಎ೦.ಪಿ.ಟಿ.ಎ.ಅಧ್ಯಕ್ಷೆ  ಶ್ರೀಮತಿ  ಸೌಮ್ಯ ನೆಲ್ಲಿಮೂಲೆ  ಶುಭ ಹಾರೈಸಿದರು. ಕು೦ಬ್ಡಾಜೆ ಗ್ರಾಮ ಸೇವಾಸಂಘ ಗ್ರಂಥಾಲಯ ಏತಡ್ಕ, ಇದರ ಕಾರ್ಯದರ್ಶಿ, ಚುಟುಕು ಸಾಹಿತಿ ಶ್ರೀ ನರಸಿಂಹ ಭಟ್ಟ ಕಟ್ಟದಮೂಲೆ ಮುಖ್ಯಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿ ಸ್ವರಚಿತ ಕವನ ವಾಚಿಸಿದರು.ಶಾಲಾ ಎಸ್. ಎಸ್. ಜಿ . ಅಧ್ಯಕ್ಷರಾದ ಶ್ರೀ ಗಣಪತಿ ಭಟ್ ಭಾಗವಹಿಸಿ  ಶುಭ ಹಾರೈಸಿದರು. ಅಧ್ಯಾಪಕರಾದ ಶ್ರೀ ರಾಜಾರಾಮ ಕೆ.ವಿ. ಮತ್ತು ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸರೋಜ .ಪಿ.ಸ್ವಾತ೦ತ್ರ್ಯ  ಹೋರಾಟದ ಬಗ್ಗೆ  ಮಾತನಾಡಿ, ದೇಶಪ್ರೇಮ ಬೆಳೆಸಿಕೊಳ್ಳುವಂತೆ ಕರೆನೀಡಿದರು.ಮಕ್ಕಳಿ೦ದ ದೇಶಭಕ್ತಿ ಗೀತೆಗಳ ಗಾಯನ, ಭಾಷಣ ಮು೦ತಾದ  ಕಾರ್ಯಕ್ರಮಗಳು ನಡೆಯಿತು.  ಸ್ವಾತ೦ತ್ಯ್ರ ರಸಪ್ರಶ್ನೆ ಸ್ಪರ್ಧೆ, ರಾಷ್ಟ್ರಧ್ವಜದ ಚಿತ್ರರಚನೆ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು.ಅಧ್ಯಾಪಕರಾದ ಶ್ರೀ ಸುಬ್ರಹ್ಮಣ್ಯ ಭಟ್ ಸ್ವಾಗತಿಸಿ, ಶ್ರೀ ಸುಧೀರ್ ಕೃಷ್ಣ ವಂದಿಸಿದರು.ವಿದ್ಯಾರ್ಥಿಗಳಾದ ಪ್ರಜ್ವಲ್ ಹಾಗುಅಪೇಕ್ಷಾ ಕಾರ್ಯಕ್ರಮ ನಿರೂಪಿಸಿದರು.ಸಿಹಿತಿ೦ಡಿ ಲಾಡು,ಚೋಕಲೇಟ್ ಹಂಚಲಾಯಿತು. ಪಾಯಸ ಕುಡಿದು ಸಂತಸಪಟ್ಟರು. ಅಧ್ಯಾಪಕರೂ,ರಕ್ಷಕರೂ ಮತ್ತು ಮಕ್ಕಳು ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು.

      






No comments:

Post a Comment